ನಮ್ಮ ಪಕ್ಷ ಪ್ರಾರಂಭದಿಂದಲೂ ಆಘಾತಗಳನ್ನು ಎದುರಿಸಿ, ಸವಾಲುಗಳನ್ನು ಗೆದ್ದು ಬಂದಿದೆ.
* ನಮ್ಮ ಭಾರತೀಯ ಜನಸಂಘ ಪ್ರಾರಂಭವಾಗಿದ್ದು 1951 ರ ಅಕ್ಟೋಬರ್ 21 ರಂದು. ಆಗ ನಮಗಿದ್ದ ಹೆಸರಿದ್ದ ಒಬ್ಬರೇ ನಾಯಕರೆಂದರೆ ನಮ್ಮ ಅಧ್ಯಕ್ಷರಾಗಿದ್ದ, ಮಾಜಿ ಕೇಂದ್ರ ಸಚಿವರಾಗಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜೀ.
ಕೇವಲ 20 ತಿಂಗಳುಗಳಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ನಮ್ಮನ್ನು ಬಿಟ್ಟು ಅಗಲಿದರು. (ಕಾಶ್ಮೀರದ ಸೆರೆಮನೆಯಲ್ಲಿ)
ಇದ್ದ ಏಕೈಕ ನಾಯಕನನ್ನು ಅಷ್ಟು ಬೇಗ ಇಪ್ಪತ್ತೇ ತಿಂಗಳಲ್ಲಿ ಕಳೆದುಕೊಂಡ ಆಗಿನ ಕಾರ್ಯಕರ್ತರ ಮನಸ್ಥಿತಿ ಹೇಗಿದ್ದಿರಬಹುದು? ಆದರೂ ಅವರು ಆ ಸವಾಲನ್ನು ಎದುರಿಸಿ ಪಕ್ಷವನ್ನು ಬಲವಾಗಿ ಕಟ್ಟಿದವರವರು.
* ನಮ್ಮ ಪಕ್ಷದ ಸೈದ್ದಂತಿಕ ಭೂಮಿಕೆ ಸಿದ್ದಗೊಳಿಸಿದ ಪಂಡಿತ್ ದೀನದಯಾಳ ಉಪಾಧ್ಯಾಯರವರು ಅನೇಕ ವರ್ಷಗಳು ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರ ಡಿಸೆಂಬರ್ 1967 ರಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾದರು. ಅದೂ ಕೇರಳದ ಕಲ್ಲಿಕೋಟೆಯಲ್ಲಿ. ಕೆಂಪು ಕೋಟೆಯಲ್ಲಿ ನೆರೆದಿದ್ದ ಕೇಸರಿಯ ಸಾಗರದ ನಡುವೆ ಆದ ಅವರ ಆಯ್ಕೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತ್ತು.
ಆದರೆ ಎರಡೇ ತಿಂಗಳಲ್ಲಿ (11.2.1968) ದೀನದಯಾಳರು ಉತ್ತರಪ್ರದೇಶದ ಮೊಗಲಸರಾಯಿ ರೈಲ್ವೇ ನಿಲ್ದಾಣದ (ಅದು ಈಗ ದೀನದಯಾಳ್ ರೈಲ್ವೇ ನಿಲ್ದಾಣವಾಗಿದೆ) ಬಳಿ ಅತ್ಯಂತ ನಿಗೂಢ ರೀತಿಯಲ್ಲಿ ನಮ್ಮನ್ನಗಲಿದರು. ಆಗ ಅವರಿಗೆ ಕೇವಲ 51 ವರ್ಷಗಳಾಗಿತ್ತು.
ಆಗ ನಮ್ಮ ಪ್ರಮುಖರ-ಕಾರ್ಯಕರ್ತರ ಮನಸ್ಥಿತಿ ಹೇಗಿದ್ದಿರಬಹುದು.
(ಬಲಿದಾನ ಕೇವಲ ಯಾವುದೋ ಒಂದು ಪಕ್ಷದ ಗುತ್ತಿಗೆಯಲ್ಲ)
ಅಟಲ್ ಬಿಹಾರಿ ವಾಜಪೇಯಿಯವರು ಅಂದು ಬಿಕ್ಕಳಿಸುತ್ತಾ "ನಾವು ಎಂದಿಗೂ ಈ ನಂದಾದೀಪ (ಜನಸಂಘದ ಅಂದಿನ ಚಿಹ್ನೆ) ನಂದಲು ಬಿಡುವುದಿಲ್ಲ" ಎಂದು ಹೇಳಿ ಸವಾಲು ಸ್ವೀಕರಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.
* 1980 ರ ಏಪ್ರಿಲ್ ತಿಂಗಳಲ್ಲಿ ನಾವು ಜನತಾಪಕ್ಷದಿಂದ ಹೊರಬಂದು (ದ್ವಿ ಸದಸ್ಯತ್ವ ಹೆಸರಿನಲ್ಲಿ ಹೊರದೂಡಲ್ಪಟ್ಟೆವು) ಭಾರತೀಯ ಜನತಾ ಪಕ್ಷ ಪ್ರಾರಂಭಿಸಿದೆವು.
1984 ರಲ್ಲಿ ಬಿಜೆಪಿ ಆಗಿ ಎದುರಿಸಿದ ಮೊದಲ ಲೋಕಸಭಾ ಚುನಾವಣೆಗಳಲ್ಲಿ (ಶ್ರೀಮತಿ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ನಂತರ ನಡೆದ ಚುನಾವಣೆಯದು) ನಾವು ಇಡೀ ದೇಶದಲ್ಲಿ ಗಳಿಸಿದ್ದು ಕೇವಲ ಎರಡೇ ಸೀಟುಗಳನ್ನು. (ಗುಜರಾತಿನಲ್ಲಿ ಏ.ಕೆ. ಪಟೇಲ್ ಮತ್ತು ಆಂಧ್ರ ಪ್ರದೇಶದಲ್ಲಿ ಜಂಗಾ ರೆಡ್ಡಿ).
ಸ್ವತಃ ಅಟಲ್ ಜೀ ಯವರನ್ನು ಅನುಕಂಪದ ಅಲೆ ಸೋಲಿಸಿಬಿಟ್ಟಿತು.
ಆಗ ಅಟಲ್ ಜಿ ನಮಗೆ ಹೇಳಿ ಕೊಟ್ಟದ್ದು ;-
" ನ ದೈನ್ಯಂ, ನ ಪಲಾಯನಂ" ಎಂದು.
* 2014 ರಲ್ಲಿ ಬಿಜೆಪಿ
(ಎನ್ ಡಿ ಎ)ಮೋದಿಯವರ ಹೆಸರಿನಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸಿತು. ಆದರೆ ಅದನ್ನು ಅನುಭವಿಸಿ ಸಂತಸ ಪಡುವ ಸ್ಥಿತಿಯಲ್ಲಿ ನಮ್ಮ ಅಟಲ್ ಜೀ ಇರಲಿಲ್ಲ.
(ಎನ್ ಡಿ ಎ)ಮೋದಿಯವರ ಹೆಸರಿನಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸಿತು. ಆದರೆ ಅದನ್ನು ಅನುಭವಿಸಿ ಸಂತಸ ಪಡುವ ಸ್ಥಿತಿಯಲ್ಲಿ ನಮ್ಮ ಅಟಲ್ ಜೀ ಇರಲಿಲ್ಲ.
* 2014 ರ ಮೇ 26 ರಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದರು. ನಮ್ಮ ಸರ್ಕಾರ ರಚನೆಯಾಯಿತು.
ಆದರೆ ಕೇವಲ ಎಂಟೇ ದಿನಕ್ಕೆ (3.6.2014) ಮೋದಿಯವರ ಸಚಿವ ಸಂಪುಟದ ಸಮರ್ಥ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ ಮುಂಡೆಯವರು ರಸ್ತೆ ಅಪಘಾತದಲ್ಲಿ ತೀರಿಕೊಂಡರು. ಆರಂಭದಲ್ಲೇ ಆದ ಬಹಳ ದೊಡ್ಡ ಆಘಾತವದು.
2017 ರಲ್ಲಿ ಮೋದಿಯವರ ಸಚಿವ ಸಂಪುಟದ ಪರಿಸರ ಖಾತೆ ಸಚಿವ, ಸಜ್ಜನ ರಾಜಕಾರಣಿ ಅನಿಲ್ ದವೆ ನಮ್ಮಿಂದ ದೂರವಾದರು.
ಈ ಮಧ್ಯೆ ಕೆಲವು ದಕ್ಷ ಸಚಿವರುಗಳ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಆತಂಕ ಉಂಟಾಗಿತ್ತು.ಆದರೆ ಅವರುಗಳು ಸುಧಾರಿಸಿಕೊಂಡು ಆರೋಗ್ಯವಂತರಾಗಿ ದಕ್ಷ ಆಡಳಿತಗಾರರಾಗಿ ಸೇವೆ ಸಲ್ಲಿಸಿರುವುದು ಎಲ್ಲರಿಗೂ ಸಮಾಧಾನ ತಂದ ವಿಚಾರ.
2018 ಆಗಸ್ಟ್ ನಲ್ಲಿ ನಮ್ಮೆಲ್ಲರ ಹೃದಯ ಸಾಮ್ರಾಟ್ ಅಟಲ್ ಜೀ ನಮ್ಮನ್ನಗಲಿದರು.
2018 ನವೆಂಬರ್ ನಲ್ಲಿ ಕೇಂದ್ರದ ಯಶಸ್ವೀ ಸಚಿವರಲ್ಲಿ ಒಬ್ಬರಾಗಿದ್ದ, ಸಂಘಟನಾ ಚತುರರಾಗಿದ್ದ, ಸಂಸದೀಯ ವ್ಯವಹಾರಗಳ ಸಚಿವರಾಗಿ ಉತ್ತಮ ಹೆಸರು ಸಂಪಾದಿಸಿದ, ಜನೌಷಧಿ ಕೇಂದ್ರ ಗಳ ರೂವಾರಿ ಅನಂತ ಕುಮಾರ್ ರವರನ್ನು ಕಳೆದುಕೊಂಡೆವು.
ಇದೀಗ ಉತ್ತಮ ರಕ್ಷಣಾ ಸಚಿವರಾಗಿ ಸರ್ಜಿಕಲ್ ಸ್ಟ್ರೈಕ್ ಖ್ಯಾತಿಯ, ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ತನ್ನ ಸರಳತೆ-ದಕ್ಷತೆ ಯಿಂದ ಇಡೀ ದೇಶದ ಮನೆಮಾತಾಗಿದ್ದ ಮನೋಹರ್ ಪರ್ರಿಕರ್ ರವರನ್ನೂ ಕಳೆದುಕೊಂಡಿದ್ದೇವೆ.
ನಿಜಕ್ಕೂ ನಾವು ಕಾರ್ಯಕರ್ತರೆಲ್ಲರೂ ದುಃಖದ ಗಳಿಗೆಗಳನ್ನು ಎದುರಿಸಿದ್ದೇವೆ, ಎದುರಿಸುತ್ತಿದ್ದೇವೆ.
ಆದರೆ,
ಚರೈವೇತಿ..ಚರೈವೇತಿ (ನಡೆಯುತ್ತಿರಿ, ನಡೆಯುತ್ತಿರಿ, ನಿಲ್ಲದಿರಿ) ಎಂಬುದು ನಮಗೆಲ್ಲಾ ಹೇಳಿಕೊಟ್ಟಿರುವ ಮಂತ್ರ
- ಸುರೇಶ್ ಕುಮಾರ್.
- ಸುರೇಶ್ ಕುಮಾರ್.
No comments:
Post a Comment